Wednesday, December 24, 2008


ಜಯಂತ ಕಾಯ್ಕಿಣಿ ಇದೀಗ ತಮ್ಮ ಅಭಿಮಾನಿ ಬಳಗಕ್ಕೆ `ಜಿಲೇಬಿ' ತಿನ್ನಿಸಲು ಸಿದ್ಧರಾಗುತ್ತಿದ್ದಾರೆ. ಚಾರ್ ಮಿನಾರ್ ತೋರಿಸಲು ಉತ್ಸುಕರಾಗಿದ್ದಾರೆ. ಸಿನೆಮಾ, ಸಿನೆಮಾ ಹಾಡುಗಳಿಂದ ಒಂದು ಮೂರ್ನಾಲ್ಕು ತಿಂಗಳುಗಳ ಕಾಲ ಬಿಡುವು ಮಾಡಿಕೊಂಡು ಕಥೆ, ಸಾಹಿತ್ಯ ರಚನೆಯ ಜೊತೆಗೆ ತನ್ನ ಆತ್ಮೀಯ ಗೆಳೆಯರ ಬಳಿಗೆ ಹೋಗುತ್ತಿದ್ದಾರೆ.ಮುಂದಿನ ಭಾನುವಾರ ಜಯಂತ ಕಾಯ್ಕಿಣಿಯವರ `ಒಂದು ಜಿಲೇಬಿ' ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಹೊಸ - ಹಳೆಯ ಕಥೆಗಳನ್ನೊಳಗೊಂಡ ಮೂರು ಸಂಪುಟದಲ್ಲಿ `ಚಾರ್ ಮಿನಾರ್' ಫೆಬ್ರವರಿ ತಿಂಗಳೊಳಗಾಗಿ ಕಾಯ್ಕಿಣಿಯವರ ಅಭಿಮಾನಿಗಳ ಕೈಯಲ್ಲಿ ಲಭಿಸಲಿವೆ. ಇದೀಗ ಅವುಗಳನ್ನೆಲ್ಲ ತಲೆಯಲ್ಲಿಟ್ಟುಕೊಂಡೇ ಒಂದಷ್ಟು ಬಿಡುವು ಮಾಡಿಕೊಂಡು ಮಂಗಳೂರಿಗೆ ಕಾಯ್ಕಿಣಿ ಬಂದಿದ್ದಾರೆ.



`ಇನ್ನೂ ಅನಿಸುತಿದೆ'....

ಹರೀಶ್ ಕೆ.ಆದೂರು
ಮಂಗಳೂರು, ಡಿ.21: ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದರೂ ಮುಂಗಾರು ಮಳೆ ಚಲನ ಚಿತ್ರದ ನಂತರ ಏಕಾಏಕಿಯಾಗಿ ಎತ್ತರಕ್ಕೇರಿ ಮನೆ ಮಾತಾದ ಸರಳ ವ್ಯಕ್ತಿತ್ವದ ಸಾಹಿತಿ ಜಯಂತ ಕಾಯ್ಕಿಣಿ ಇದೀಗ ಕೊಂಚ ಬಿಡುವು ಮಾಡಿಕೊಂಡಿದ್ದಾರೆ.
ಮುಂಗಾರು ಮಳೆ ಸಿನೆಮಾ `ಗಣೇಶನ ' ಸಿನೆಮಾ ಎಂದು ಎಷ್ಟು ಖ್ಯಾತಿ ಪಡೆಯಿತೋ ಅದಕ್ಕಿಂತ ಒಂದು ಪಟ್ಟು ಹೆಚ್ಚು ಖ್ಯಾತಿ ಪಡೆದದ್ದು ಕಾಯ್ಕಿಣಿಯ ಸಾಹಿತ್ಯದ ಮೂಲಕ ಅವರ ಹಾಡುಗಳ ಮೂಲಕ ಎಂಬುದು ನಿತ್ಯ ಸತ್ಯ.
ಮುಂಗಾರು ಮಳೆ ಸಿನೆಮಾದ ನಂತರ 150 ಹಾಡುಗಳನ್ನು ಈ ಸಾಹಿತಿ ವಿವಿಧ ಚಿತ್ರಗಳಿಗಾಗಿ ಎಡೆಬಿಡದೆ ಬರೆದಿದ್ದಾರೆ. ಬಿರುಗಾಳಿ, ಜೊತೆಗಾರ, ಜಂಗಲಿ, ಮಚ್ಚ, ಸಿಹಿಮುತ್ತು , ಹಾಗೆ ಸುಮ್ಮನೆ ಈ ಎಲ್ಲಾ ಸಿನೆಮಾಗಳಲ್ಲೂ ಕಾಯ್ಕಿಣಿ ರಚನೆಯ ಹಾಡುಗಳೇ ಕೇಳಿಬರುತ್ತಿವೆ. 40ಕ್ಕೂ ಹೆಚ್ಚು ಹಾಡುಗಳು ವಿವಿಧ ಸಿನೆಮಾಗಳಲ್ಲಿ ಮೂಡಿಬಂದು ಜನಮನ ಗೆದ್ದವು. ಇನ್ನು ಕೆಲವು ಹಾಡುಗಳು ಸಿನೆಮಾಗಳಿಗಾಗಿ ರಚನೆಯಾಗಿ ಕೂತಿವೆಯಂತೆ. 30ರಷ್ಟು ಹಾಡುಗಳು ಹಾಗೇ ಇವೆ. ಒಳ್ಳೆಯ ಸಿನೆಮಾಗಳು ಯಾವುದಾದರೂ ಬಂದರೆ ಅವುಗಳಿಗೆ ನೀಡುತ್ತೇನೆ ಎನ್ನುತ್ತಾರೆ ಕಾಯ್ಕಿಣಿ.
ಅಂದಹಾಗೆ ಅವರು ಮಾತಿಗೆ ಸಿಕ್ಕಿದ್ದೇ ಒಂದು ಅವಿಸ್ಮರಣೀಯ ಸಂದರ್ಭ. ಮಂಗಳೂರಿನಲ್ಲಿರುವ ನನ್ನ ಪುಟ್ಟ ಬಾಡಿಗೆ ಮನೆಗೆ ಜಯಂತ ಕಾಯ್ಕಿಣಿ ರವಿವಾರ ಭೇಟಿ ನೀಡಿ ಒಂದಷ್ಟು ಹೊತ್ತು ಆರಾಮವಾಗಿ ಕಾಲ ಕಳೆದರು. ಹಳೆಯ ಸಿಹಿ, ಕಹಿ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ನಮ್ಮೆಲ್ಲರನ್ನು ಬಿಟ್ಟು ಹೋದ ಹಿರಿಯ ಸಾಹಿತಿ ಎಂ.ವ್ಯಾಸರ ನೆನಪುಗಳನ್ನು ಮೆಲುಕುಹಾಕಿದರು. ಅವರಿದ್ದಾಗಲೇ ಅವರ ಒಂದಷ್ಟು ಬರಹಗಳು ಕೃತಿರೂಪದಲ್ಲಿ ಬರಬೇಕಿತ್ತು ಎಂಬ ಮಾತುಗಳು ಅವರ ಬಾಯಿಂದ ಬಂದವು.
ಪುಟ್ಟ ಮನೆಯ ಮುಂದಿರುವ ತುಳಸಿಕಟ್ಟೆ, ಬಾಳೆಗಿಡ, ಅಡಿಕೆಮರ, ನೀರು ತುಂಬಿದ ಗದ್ದೆ,ತೆಂಗು, ಮಾವಿನ ಮರಗಳು ಇದನ್ನೆಲ್ಲಾ ನೋಡಿದ ಜಯಂತ ಕಾಯ್ಕಿಣಿಯವರು `ನನಗೆ ಊರಿಗೆ ಹೋದ ನೆನಪಾಗುತ್ತಿದೆ ...ಒಳ್ಳೆ ಜಾಗ...'ಎನ್ನುತ್ತಾ ಒಂದಷ್ಟು ಹೊತ್ತು ಆರಾಮವಾಗಿ ಕುಳಿತು ಮಾತಿಗಿಳಿದರು.
ಅದೇ ಮುಗ್ಧವಾದ ಮನಸ್ಸಿನಿಂದನ, ಮುಕ್ತವಾಗಿ ಮಾತನಾಡಿದರು.
ಪ್ರೇಮಿಗಳ ದಿನಕ್ಕಾಗಿ... : ಮನೋಮೂತರ್ಿ , ಸೋನು ನಿಗಮ್, ಜಯಂತ ಕಾಯ್ಕಿಣಿ ಸೇರಿಕೊಂಡು ಯುವ ಪ್ರೇಮಿಗಳಿಗಾಗಿಯೋ ಎಂಬಂತೆ ಪ್ರೇಮಿಗಳ ದಿನಕ್ಕೊಂದು ಸ್ಪಷೆಲ್ ಗಿಫ್ಟ್ ರೆಡೀ ಮಾಡ್ತಿದ್ದಾರೆ. ಹೊಸ ಪ್ರೀತಿ, ಪ್ರೇಮದ ಗೀತೆಗಳ ಗುಚ್ಛವದು. 9 ಹಾಡುಗಳನ್ನೊಳಗೊಂಡ `ಇನ್ನೂ ಅನಿಸುತಿದೆ' ಎಂಬ ಹಾಡುಗಳ ಸಂಗ್ರಹ ಇದೀಗ ವೆಲೆಂಟೈನ್ಸ್ ಡೇಗಾಗಿ ತಯಾರಾಗುತ್ತಿದೆ.
ಹಾಗೇ ಸುಮ್ಮನೆ: ಮನೋಮೂತರ್ಿ ಹಾಗೂ ಜಯಂತ ಅವರ ಗೆಳೆತನಕ್ಕೆ ಸಾಕ್ಷಿಯಾಗಿ ಹಾಗೇ ಸುಮ್ಮನೆ ಚಿತ್ರ ಇದೀಗ ಸಿದ್ಧವಾಗುತ್ತಿದೆ. ಚಿತ್ರದಲ್ಲಿರುವ ಆರೂ ಹಾಡುಗಳು ಕಾಯ್ಕಿಣಿಯವರ ಲೇಖನಿಯಿಂದ ಮೂಡಿಬಂದವುಗಳು. ಈ ಹಾಡುಗಳು ಹೊಸ ಅನುಭವವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಕಾಯ್ಕಿಣಿ.

Wednesday, December 3, 2008

ಮುಕ್ತ ಮನಸ್ಸಿನ ಪ್ರಶಂಸೆ...

ಅದು ನವೆಂಬರ್ ತಿಂಗಳ 28
ಎದ್ದುಕಾಣುವ ಮೂರಕ್ಷರದ ಶೀಷರ್ಿಕೆ!
`ಧಿಕ್ಕಾರ'!
ಕೆಚ್ಚೆದೆಯ ಕಾರ್ಯವನ್ನು ಕನ್ನಡ ಪ್ರಭ ದೈನಿಕ ಮಾಡಿದೆ. ನಿಜವಾಗಿಯೂ ಕನ್ನಡ ಪ್ರಭವನ್ನು ಮೆಚ್ಚಲೇ ಬೇಕು. ಭೇಷ್ ಎನ್ನಲೇ ಬೇಕು.
ಉಗ್ರರ ಅಟ್ಟಹಾಸ ಮೇರೆ ಮೀರಿದ ದಿನಗಳಲ್ಲಿ ಇಂದಿಗೂ ಮಾಧ್ಯಮಗಳು ಕೇವಲ ರಾಜಕಾರಣಿಗಳ ಪೇಲವ ಹೇಳಿಕೆಗಳಿಗೆ ಜೋತು ಬಿದ್ದಿರುವಾಗ ಕನ್ನಡ ಪ್ರಭ ಉಗ್ರ ರೀತಿಯ ಪ್ರತಿಭಟನೆ ನಡೆಸಿದ್ದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಮತ್ತು ಪ್ರಶಂಸಿಸಲೇ ಬೇಕು.
`` ಮನುಕುಲ ವಿರೋಧಿ ಉಗ್ರಗಾಮಿಗಳಿಗೆ, ಸಾವಿರ ಭಯೋತ್ಪಾದನೆಗಳಿಂದಲೂ ಪಾಠ ಕಲಿಯದ ಸಕರ್ಾರಗಳಿಗೆ, ಇನ್ನೆಂದೂ ಈ ರೀತಿ ಆಗಲು ಬಿಡೆವು ಎನ್ನುವ ಮಂತ್ರಿಗಳಿಗೆ, ಕಠಿಣ ಉಗ್ರ ನಿಗ್ರಹ ಕಾನೂನು ರೂಪಿಸಲು ವಿರೋಧಿಸುವ ರಾಜಕೀಯ ಪಕ್ಷಗಳಿಗೆ, ಓಟಿಗಾಗಿ ಧರ್ಮವನ್ನು ವಿಭಾಗಿಸಿ ಸಂತೈಸುವ ಮತರಾಕ್ಷ ರಾಜಕಾರಣಿಗಳಿಗೆ, ಸಂಸತ್ತಿನ ಮೇಲೆ ದಾಳಿ ನಡೆಸಿದವರನ್ನು ಶಿಕ್ಷಿಸಬಾರದು ಎನ್ನುವ ಮಹಾನುಭಾವರಿಗೆ, ಡೋಂಗಿ ಜಾತ್ಯಾತೀತ ಹಾಗೂ ಚಾಳುಬಾಯಿಯ ಬುದ್ಧಿಜೀವಿಗಳಿಗೆ, ಉಗ್ರರೊಡನೆ ಹೋರಾಡಿ ಅಧಿಕಾರಿ ಮಡಿದಾಗ ನ್ಯಾಯಾಂಗ ತನಿಖೆಗೆ ಒತ್ತಾಯಿಸುವ ಅಮಾನವೀಯ ಹಕ್ಕು ಪ್ರತಿಪಾದಕರಿಗೆ ಮತ್ತು ಈ ಮೊದಲೇ ದಾಳಿಯ ಎಚ್ಚರಿಕೆ ನೀಡಿದ್ದೆವು ಎಂದು ಬೆನ್ನುತಟ್ಟಿಕೊಳ್ಳುವ ಗುಪ್ತದಳದವರಿಗೆ ಜನಸಾಮಾನ್ಯರ ಹಿಡಿಶಾಪ ಮತ್ತು ಧಿಕ್ಕಾರ''
ಹೀಗೆ ಮುಖಪುಟದಲ್ಲಿ ದೊಡ್ಡ ಅಕ್ಷರಗಳ ವರದಿಯನ್ನು ಈ ಪತ್ರಿಕೆ ಮಾಡಿತ್ತು.
ಈಗ ಪತ್ರಿಕೆ ಪತ್ರಿಕೋದ್ಯಮವಾಗಿದೆ. ಈ ದಿನಗಳಲ್ಲಿ ನೈಜ ಪತ್ರಿಕಾ ಧರ್ಮ ಮರೆಯಾಗಿದೆ. ಏನಿದ್ದರೂ ಕೇವಲ ಅವಸರದ ಕಾರ್ಯ ಮಾದ್ಯಮಗಳಲ್ಲಾಗುತ್ತಿದೆ. ಹಣಕೊಟ್ಟವರಿಗೆ ಜೋತುಬೀಳುತ್ತಿರುವ ಮಾಧ್ಯಮಗಳು ಇಂದು ಹೆಚ್ಚಾಗಿವೆ. ಇದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾಗಿಲ್ಲ. ಅದು ಇಲೆಕ್ಟ್ರಾನಿಕ್ ಮಾಧ್ಯಮಗಳಿಗೂ ಅನ್ವಯವಾಗುತ್ತಿದೆ. ಮಾಧ್ಯಮಗಳು ಇಂದು ಅತಿರಂಜಿತ ಸುದ್ದಿಗಳನ್ನು ಮಾಡುತ್ತಿದೆ. ಅದಾಗ ಎಲ್ಲೋ ನಿಜವಾದ ಮಾಧ್ಯಮ ನೀತಿ ಮರೆಯಾಗುತ್ತಿದೆ ಎಂಬುದು ವಾಸ್ತವಾಂಶ. ಆದರೆ ಎಲ್ಲೋ ಒಂದೆರಡು ಸುದ್ದಿವಾಹಿನಿಗಳು, ಪತ್ರಿಕೆಗಳು ಇಂದಿಗೂ ಮೌಲ್ಯವನ್ನು ಉಳಿಸಿಕೊಂಡಂತಿದೆ. ಅದೇನೇ ಇರಲಿ ಇಂದು ಕೇವಲ ನೀತಿ, ಮೌಲ್ಯ, ಸಿದ್ಧಾಂತಗಳು `ಪಠ್ಯ'ಕ್ಕಷ್ಟೇ ಸೀಮಿತ. ಇಂತಹ ಸಂದರ್ಭದಲ್ಲಿ `ಕನ್ನಡ ಪ್ರಭ' ಇದೀಗ ನೀಡುತ್ತಿರುವ ವರದಿಗಳು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಅದೊಂದು ಮೆಚ್ಚತಕ್ಕಂತಹ ಒಪ್ಪತಕ್ಕಂತಹ ಕಾರ್ಯ ಮಾಡಿದೆ.

Monday, September 15, 2008

ತಪ್ಪುಮಾಡಿದವ ಶಿಕ್ಷೆ ಅನುಭವಿಸಲೇ ಬೇಕು...

* ಹರೀಶ್ ಕೆ. ಆದೂರು

`ಉ ಪ್ಪು ತಿಂದವನು ನೀರು ಕುಡಿಯಲೇ ಬೇಕು... ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು'... ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯೂ ಇದೇನೇ... ಹಿಂದೂಗಳು ಸ್ವಾಭಿಮಾನಿಗಳು... ಹಿಂದೂಗಳಿಗೂ ತಮ್ಮ ಧರ್ಮದ ಮೇಲೆ ಅವಹೇಳನ ಮಾಡಿದರೆ, ಧರ್ಮವನ್ನು ನಿಂದಿಸಿದರೆ ಸಹಿಸಿಕೊಳ್ಳಲು ಅಸಾಧ್ಯ ಎಂಬುದನ್ನು ತೋರಿಸಿದ್ದಾರಷ್ಟೇ... ಇದೊಂದು ಎಚ್ಚರಿಕೆ...ಮುನ್ಸೂಚನೆಯಷ್ಟೇ...
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತಾಕ್ಷಣ ನಾವು ಏನು ಮಾಡಿದರೂ ಸರಿಯೇ ಎಂಬುದು ಬರೇ ಭ್ರಮೆ. ಪಾಶ್ಚಾತ್ಯದ `ದಾಸ್ಯ'ರಿಂದ ನಾವು ಮುಕ್ತರಾಗಿದ್ದೇವಷ್ಟೇ ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ಅದು ಹಿಂದೂಗಳಾಗಿರಬಹುದು, ಕ್ರೈಸ್ತರೇ ಆಗಿರಬಹುದು...ಮುಸ್ಲಿಮರಾಗಿರಬಹುದು...
ಆದರೆ ಯಾವ ಧರ್ಮವನ್ನೂ, ಯಾರ ದೇವತೆಯನ್ನೂ, ಯಾವ ಧಾರ್ಮಿಕ ಮಹಾನ್ ಪುರುಷರನ್ನು ನಿಂದಿಸುವ ಅಧಿಕಾರ ಯಾವ ಧರ್ಮಕ್ಕೂ ಇಲ್ಲ...ಯಾರಿಗೂ ಇಲ್ಲ. ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಲೇ ಬೇಕು.
ದಕ್ಷಿಣ ಕನ್ನಡವೂ ಸೇರಿದಂತೆ ಚಿಕ್ಕಮಗಳೂರು ಇತರೆಡೆಗಳಲ್ಲಿ ರವಿವಾರ ಪ್ರಾರ್ಥನಾ ಮಂದಿರಗಳ ಮೇಲೆ ಧಾಳಿಗಳಾಗಿವೆ. ಇದಕ್ಕೊಂದು ಕಾರಣವಿದೆ. ನ್ಯೂ ಲೈಫ್ ಪ್ರಕಟಣೆಯ `ಸತ್ಯ ದಶರ್ಿನಿ' ಪುಸ್ತಕದಲ್ಲಿ ಹಿಂದೂ ದೇವತೆಗಳನ್ನು, ಸಂಸ್ಕೃತಿಯನ್ನು, ಬ್ರಾಹ್ಮಣರನ್ನು ಹೀನಾಯವಾಗಿ ಚಿತ್ರಿಸಲಾಗಿದೆ. ಇದನ್ನು ಓರ್ವ ಪ್ರಜ್ಞಾವಂತ ಹಿಂದೂ ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ...? ಇದೇ ರೀತಿ ಕ್ರೈಸ್ತ ಧರ್ಮದ ಗುರುಗಳನ್ನು, ಆ ಧರ್ಮದ ಮಹಾನ್ ಪುರುಷರನ್ನು, ಅವರ ದೇವತೆಗಳನ್ನು ಚಿತ್ರಿಸಿದ್ದಾದರೆ ಅದನ್ನು ಆ ಧರ್ಮದ ಅನುಯಾಯಿಗಳು ಸಹಿಸಿಕೊಳ್ಳುತ್ತಿದ್ದರೇ...? ಅದನ್ನು ನೋಡಿಕೊಂಡು ಅವರು ಕೂರುತ್ತಿದ್ದರೇ....?
ಖಂಡಿತಾ ಇಲ್ಲ. ಯಾವುದೇ ಧರ್ಮವಾಗಲೀ ಅದರ ಅನುಯಾಯಿಗಳು ಆ ಧರ್ಮದ ಮೇಲೆ ನಂಬಿಕೆಯಿಟ್ಟಿರುತ್ತಾರೆ... ಅವರ ನಂಬಿಕೆ , ನಡವಳಿಕೆ, ಭಕ್ತಿಯ ಮೇಲೆ ಇನ್ನೊಬ್ಬ ಸವಾರಿ ಮಾಡುವುದನ್ನು, ಅವಹೇಳನೆ ಮಾಡುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ. ಇದನ್ನು ಪ್ರತಿಯೊಂದು ಧರ್ಮದ ಅನುಯಾಯಿಗಳು ತಿಳಿಯಬೇಕಾಗಿದೆ.
`ಶಾಂತಿ', `ಸಹಬಾಳ್ವೆ'ಯೆಂದು ಹೇಳಿಕೊಳ್ಳುವ ಕ್ರೈಸ್ತ ಸಮುದಾಯ ತನ್ನ ಈ ಮಾತನ್ನು ಹಾಗಾದರೆ ಎಷ್ಟರ ಮಟ್ಟಿಗೆ ಉಳಿಸಿಕೊಂಡಿದೆ...? ಆ ಧರ್ಮಕ್ಕೆ ಶಾಂತಿ, ಸಹಬಾಳ್ವೆ, ಸಹೋದರತ್ವ ಭಾವನೆ ಇದ್ದದ್ದೇ ಆಗಿದ್ದಲ್ಲಿ `ಸತ್ಯ ದರ್ಸಿನಿ' ಪುಸ್ತಕದಲ್ಲಿ ಯಾಕೆ ಆ ರೀತಿಯಲ್ಲಿ ಹಿಂದೂ ಧರ್ಮ, ದೇವತೆಗಳನ್ನು ಚಿತ್ರಿಸಬೇಕಿತ್ತು...?
ಈ ನಿಟ್ಟಿನಲ್ಲಿ ಕ್ರೈಸ್ತ ಧಮರ್ೀಯರು ಯಾಕೆ ಯೋಚಿಸಿಲ್ಲ...
ಸನಾತನ ಹಿಂದೂ ಧರ್ಮದ ಮೇಲೆ ನಿರಂತರ ಏಟು ಬೀಳುತ್ತಿರುವುದನ್ನೂ ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ...?
ಹೈದರಾಬಾದಿನ ಕರುಣಾಮಯ ಮಿನಿಸ್ಟ್ರೀಸ್ ಪ್ರಕಟಿಸಿರುವ `ಸತ್ಯ ದರ್ಸಿನಿ'ಯನ್ನು ಬರೆದವರು ರೆ.ಪರಮಸ್ತು ಸೂರ್ಯ ನಾರಾಯಣ. ಇದರಲ್ಲಿ ಶ್ರೀ ರಾಮ, ಕೃಷ್ಣ , ಬ್ರಹ್ಮ, ವಿಷ್ಣು, ಮಹೇಶ್ವರ ದೇವರನ್ನು , ಬ್ರಾಹ್ಮಣರನ್ನು ತೀರಾ ಅವಹೇಳನ ಕಾರಿಯಾಗಿ ಚಿತ್ರಿಸಿದ್ದು ಅಸಂಖ್ಯ ಹಿಂದೂಗಳ ಭಾವನೆಗಳಿಗೆ ಧಕ್ಕೆತಂದಿದೆ ಎಂದೇಕೆ ಈ ಮಹಾನ್ ಲೇಖಕರು ಯೋಚಿಸಿಲ್ಲ. ಅದಾಗ ಅವಿರಗೆ ತಮ್ಮ ಧರ್ಮ ಹೇಳಿರುವ `ಶಾಂತಿ'... `ಸಹಬಾಳ್ವೆ'...ಪ್ರೀತಿ, ವಾತ್ಸಲ್ಯಗಳು ಎಲ್ಲಿ ಹೋಗಿದ್ದವು... ಅವೆಲ್ಲಾ ಕೇವಲ ಪುಸ್ತಕಗಳಿಗೆ, ಅವರರವ ಧರ್ಮ ಗ್ರಂಥಗಳಿಗೆ ಅಥವಾ ಕೇವಲ ಉಪದೇಶಗಳಿಗಷ್ಟೇ ಸೀಮಿತವಾಗಿದ್ದವೇ...
`ಸತ್ಯ ದಶರ್ಿನಿಯ ಪುಟ ಸಂಖ್ಯೆ 48ರಲ್ಲಿ ಹೀಗಿದೆ. ಬ್ರಾಹ್ಮಣರಿಗೆಲ್ಲಾ ಮೂಲ ಪುರಷನಾದ ವಸಿಷ್ಠ ಮಹರ್ಷಿ ಶ್ರೀರಾಮನಿಗೆ ಗುರುವು ಆಗಿದ್ದಾನೆ. ಈತನು ವೇಶ್ಯೆಯಾದ ಉರ್ವಶಿಯ ಗರ್ಭದಲ್ಲಿ ಹುಟ್ಟಿದವನು. ಸೂಳೆಯಾದ ಊರ್ವಶಿಯು ಮಹಾವಿಷ್ಣುವಿಗೆ ಕುಮಾರಿ. ವಶಿಷ್ಠನು ಈ ಶೂದ್ರ ಸ್ತ್ರೀಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಇವರೀರ್ವರ ಸಂತಾನದಿಂದ ಬಂದವರೇ ಬ್ರಾಹ್ಮಣರು. ಆದ ಕಾರಣ ಬ್ರಾಹ್ಮಣರು ಶೂದ್ರ ಕುಲಕ್ಕೆ ಸೇರಿದವರಲ್ಲವೇ...?'
ಇಂತಹ ಹೇಳಿಕೆಗಳು, ಬರಹಗಳು ಎಂತಹವನನ್ನೂ ರೊಚ್ಚಿಗೆಬ್ಬಿಸದೇ...
ಯಾವುದೇ ಒಂದು ಸಣ್ಣ ಘಟನೆಗಳನ್ನು ನಡೆದರೂ ಮೂಗುತೂರಿಸುವ `ರಾಜಕೀಯ' ವ್ಯಕ್ತಿಗಳು `ಬೆಂಕಿಗೆ ತುಪ್ಪ' ಸುರಿಯುವ ಕಾರ್ಯವನ್ನು ಇಂದು ಮಾಡುತ್ತಿದ್ದಾರೆ.
ಘಟನೆಗಳಿಗೆ ರೆಕ್ಕೆ,ಪುಕ್ಕಗಳನ್ನು ಸೇರಿಸಿ, ಉಪ್ಪು ಖಾರಗಳನ್ನು ಸೇರಿಸಿ ಒಂದಷ್ಟು ಹುಳಿ ಹಿಂಡಿ ತಮ್ಮ ಬೇಳೆ ಬೇಯುಸುತ್ತಿದ್ದಾರೆ. ಇದು ತೀರ ಖಂಡನೀಯ.
ಒರಿಸ್ಸಾದಲ್ಲಿ ಮಿಷನರಿಗಳು ವಯೋವೃದ್ಧ ಲಕ್ಷ್ಮಣಾನಂದ ಸ್ವಾಮೀಜಿಯವರನ್ನು ಬರ್ಬರವಾಗಿ ಕೊಂದಾಗ ನಮ್ಮ ಪ್ರಧಾನಿಗಳಿಗೆ, ರಾಜಕೀಯ ನೇತಾರರಿಗೆ ಕನಿಷ್ಠಪಕ್ಷ ಖಂಡನೆ ನೀಡುವಷ್ಟೂ ಪುರಸೊತ್ತಿರಲಿಲ್ಲ. ಅದನ್ನು ಬೇರೇ ರೀತಿಯಲ್ಲಿ ಚಿತ್ರಿಸುವ ಸಾಹಸಕ್ಕೆ ಆ ಮುಖಂಡರು ಮಾಡಿದ್ದಾರೆ. ಇದೀಗ ಮತ್ತೆ `ಪ್ರಾರ್ಥನಾ ಮಂದಿರಗಳ ಮೇಲಿನ' ಧಾಳಿಯನ್ನು ಇದೇ ರೀತಿಯಲ್ಲಿ ಚಿತ್ರಿಸಹೊರಟಿದ್ದಾರೆ ಈ ರಾಜಕೀಯ ಮುಖಂಡರು.
ನಿಜವಾಗಿಯೂ ಇವರಿಗೆ ಕೆಚ್ಚಿದ್ದರೆ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂಬುದೇ ಇವರ ಧ್ಯೇಯವಾಗಿದ್ದರೆ ಷಂಢತನದ ಹೇಳಿಕೆಗಳನ್ನು ನೀಡಿ `ವೋಟ್ ಬ್ಯಾಂಕ್' ರಾಜಕಾರಣ ಮಾಡುವುದನ್ನು ಬಿಟ್ಟು ಸತ್ಯದತ್ತ ಮುಖಮಾಡಲಿ...

Wednesday, July 23, 2008



`ಎರಡಕ್ಷರದ' ಹಿರಿಮೆ
ಇನ್ನು ನೆನಪು ಮಾತ್ರ...


















`` ಗಡಿನಾಡ ಕಾಸರಗೋಡಿನಲ್ಲಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ಕೊಡುಗೆ ನೀಡಿದವರು ಹಿರಿಯ ಕಥೆಗಾರ ಎಂ.ವ್ಯಾಸ. ಮನೆತುಂಬಾ ಪುಸ್ತಕ,ಗ್ರಂಥ, ಸಾಹಿತ್ಯ ಪತ್ರಿಕೆಗಳು..ಅಭಿಮಾನಿ ಓದುಗರ, ಹಿರಿ ಕಿರಿಯ ಸಾಹಿತಿಗಳ ಪತ್ರಗಳ ರಾಶಿ...ಈ ನಡುವೆ ಎಂ.ವ್ಯಾಸ. ಕಾಸರಗೋಡಿನಲ್ಲಿದ್ದೇ ಕೇರಳ, ಕನರ್ಾಟಕ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದರು.
ವ್ಯಾಸರೊಂದಿಗಿನ ಆತ್ಮೀಯ ಸಂಬಂಧ ಅದೊಂದು ಮರೆಯದ ಅನುಬಂಧ. ನಮ್ಮಂಥ ಕಿರಿಯರಲ್ಲೂ ಆ ಹಿರಿಯ ವ್ಯಕ್ತಿ ಅಂತಹ ಸ್ನೇಹ, ಪ್ರೀತಿ , ಆತ್ಮೀಯತೆಯನ್ನು ಇಟ್ಟುಕೊಳ್ಳುವ ವಿಶಾಲ ಹೃದಯ ಹೊಂದಿದ್ದರು. ಆ ಭಾಗ್ಯ ನನಗೂ ಒಲಿದು ಬಂದಿದೆ. ಇದೀಗ ಎಂ.ವ್ಯಾಸ ನಮ್ಮೆಲ್ಲರ ಬಿಟ್ಟು ಹೊರಟು ಹೊರಟು ಹೋಗಿದ್ದಾರೆ. ಹೃದಯ ಭಾರವಾಗುತ್ತಿದೆ... ಅವರೊಂದಿಗಿದ್ದ ಕ್ಷಣ ಕ್ಷಣಗಳೂ ನೆನಪಿಗೆ ಬರುತ್ತವೆ...ಕಣ್ಣು ಮಂಜಾಗುತ್ತವೆ... ಇನ್ನು ಅವರು ನೆನಪು ಮಾತ್ರ...
-
ಹರೀಶ್ ಕೆ.ಆದೂರು


ಹೌದು... ಅವರೊಬ್ಬ ಸರಳ ಸಜ್ಜನ ಜೀವಿ... ಅವರು ಎರಡಕ್ಷರದ ಕಥೆಗಳಿಗೆ ಹೆಸರು ವಾಸಿ... ಅವರ ಹೆಸರೂ ಹಾಗೆ ಎರಡಕ್ಷರವೇ... ಅವರೇ ಹಿರಿಯ ಕಥೆಗಾರ ಎಂ. ವ್ಯಾಸ.
ಅವರ ಕಥೆಗಳಿಗೆ ಕೇವಲ ಎರಡಕ್ಷರಗಳ ಶೀಷರ್ಿಕೆ. ಈ ಕಾರಣಕ್ಕಾಗಿಯೇ ಎರಡಕ್ಷರದ ಕಥೆಗಾರ ಎಂದೇ ಖ್ಯಾತಿ ಪಡೆದಿದ್ದಾರೆ.`ದತ್ತ', `ತ್ರಿಜ್ಜ' , `ಕೆಂಡ' ಈ ರೀತಿ ಆಕರ್ಷಕ ಶೀಷರ್ಿಕೆ ಅವರದ್ದು. ಮಾಮೂಲಿಗಿಂತ ಭಿನ್ನವಾದ ಕಥೆಗಾರ ಅವರು.
ಅವರ ಕಥೆಯೂ ಹಾಗೆ ಒಂದು ವಿಭಿನ್ನವಾದುದು. ಅದು ಸುಂದರವಾದ ಹೂರಣ. ಅದು ಕಥೆಯಲ್ಲ...ಬದಲಾಗಿ ಅದೊಂದು ಘಟನೆಗಳ ಬುತ್ತಿ.ಚಿತ್ರಗಾರನ ಚಿತ್ರವಿದ್ದಂತೆ... ಕಥೆಯ ಬಗ್ಗೆ ಅವರು ಹೇಳುವ ರೀತಿಯೇ ಒಂದು ವಿಭಿನ್ನ ಅನುಭವ... ಆ ರೀತಿ ಅವರ ಕಥೆಗಳು ಸಾಗುತ್ತವೆ. ಅವರ ಕಥೆಯನ್ನೋದುವಾಗ ಅದೊಂದು ಚಿತ್ರಣದಂತೆ ಭಾಸವಾಗುತ್ತದೆ. ಆ ರೀತಿ ವ್ಯಾಸ ಅವರ ಕಥೆಗಳು ಓದುಗರಿಗೆ ಒಂದು ವಿಭಿನ್ನ , ಆಪ್ತ ಅನುಭವವನ್ನೀಯುತ್ತವೆ.
ಅವರ ಕವನಗಳೂ ಹಾಗೆಯೇ.
ವ್ಯಾಸ ಈ ಹೆಸರು ಕೇಳಿದರೆ ಅವರ ಕಥೆಗಳ ಒಂದೊಂದು ಸಾಲೂ ಮನಃದಲ್ಲಿ ಮೂಡಿಬರುತ್ತವೆ. ಸಪೂರವಾದ ನೀಳ ಕಾಯ. ಶ್ವೇತ ವರ್ಣದ ಅಂಗಿ, ಕಪ್ಪು ಕನ್ನಡಕ , ಉದ್ದದ ಕೂದಲು, ಕೋಲು ಮುಖ ಹೀಗೆ ಅವರ ಚಹರೆ ಕಣ್ಣಮುಂದೆ ಕಟ್ಟಿನಿಲ್ಲುತ್ತದೆ. ಆತ್ಮೀಯ ಜೀವಿ ಈ ವ್ಯಾಸ. ಈ ಅನುಭವ ಅವರೊಂದಿಗೆ ಅಷ್ಟೊಂದು ಒಡನಾಟ ಹೊಂದಿದವರಿಗೆ ಮಾತ್ರ ಚೆನ್ನಾಗಿ ಅರ್ಥವಾಗುತ್ತದಷ್ಟೆ. ಅಂತಹ ವ್ಯಾಸ ನಮ್ಮೆಲ್ಲರನ್ನು ಬಿಟ್ಟು ಹೊರಟೇ ಹೋಗಿದ್ದಾರೆ. ತಟ್ಟನೆ ಎದ್ದು ನಡೆದೇ ಬಿಟ್ಟಿದ್ದಾರೆ...ಇನ್ನೂ ಅವರು ಇದ್ದಾರೆಂಬ ಭಾವನೆ ಎಲ್ಲರ ಮನದಲ್ಲೂ ಹಾಗೇ ಉಳಿಸಿ...
ವ್ಯಾಸ ಎಲ್ಲರಂತಲ್ಲ. ನೇರ ಮಾತು.. ಪ್ರಶಸ್ತಿ , ಪ್ರಚಾರಗಳಿಗೆ ಓಲೈಸಿದವರಲ್ಲ.
ಅವರು ತನ್ನ ಕಪ್ಪು ಫ್ರೇಮಿನ ಕನ್ನಡಕ ಕೈಯಲ್ಲಿ ಹಿಡಿದು ಕಾಲ ಮೇಲೆ ಕಾಲು ಹಾಕಿ ಕುಳಿತು ಮಾತಿಗಿಳಿದರೆ ಒಂದೊಂದಾಗಿ ಘಟನೆಗಳು ಅವರ ಬಾಯಿಂದ ಬರುತ್ತವೆ. ಹಿರಿ ಕಿರಿಯ ಸಾಹಿತಿಗಳು, ಅವರ ಸಾಹಿತ್ಯ ಕೃತಿಗಳು, ಹೊಸ ತಲೆಮಾರಿನ ಸಾಹಿತ್ಯ ಮಿತ್ರರ ಒಡನಾಟ ಇವೆಲ್ಲವನ್ನೂ ಅವರು ಹೇಳುತ್ತಲೇ ಸಾಗುತ್ತಾರೆ. `ನಿಮಗಿವರನ್ನು ಗೊತ್ತುಂಟಾ... ಚೆನ್ನಾಗಿ ಬರೀತಾನೆ... ಒಳ್ಳೆ ಮನುಷ್ಯ ' ಹೀಗೆ ಒಬ್ಬೊಬ್ಬರ ಬಗ್ಗೆಯೂ ಸಾಕಷ್ಟು ಮಾಹಿತಿ ಹೊಂದಿದ ವ್ಯಾಸರ ಒಡನಾಟವೇ ಒಂದು ವಿಶಿಷ್ಠ ಅನುಭವನ್ನೀಯುತ್ತದೆ. ಅವರ ಮನೆಯೊಳಗೆ ಕುಳಿತು ಸಾಹಿತ್ಯದ ಚಚರ್ೆಗಳು, ವಿಮರ್ಷಗಳು ತೊಡಗಿದರಂತೂ ಹೊತ್ತು ಹೋಗುವುದೇ ಗೊತ್ತಾಗದು... ಗಡಿನಾಡ ಕಾಸರಗೋಡಿನಲ್ಲಿ ಹಸಿರ ಐಸಿಯ ನಡುವೆ ಕುಳಿತು ಅವರು ರಚಿಸದ ಸಾಹಿತ್ಯಗಳು ಇಂದು ಏರಿದ ಎತ್ತರ ಊಹಿಸಲಾಧ್ಯ.
ಯಾರ ಮನಸ್ಸನ್ನೂ ನೋಯಿಸದ ಅವರು ಓರ್ವಉತ್ತಮ ಕಥೆಗಾರರು. ಅಷ್ಟೇ ಅಲ್ಲದೆ ಕಥೆಯ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಎಂ ವ್ಯಾಸ ಕೇರಳದಲ್ಲಷ್ಟೇ ಅಲ್ಲ, ಕನರ್ಾಟಕದಲ್ಲೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
`ಕಥೆ ಬರೆಯುವುದು ಒಂದು ಕಲೆ. ಅದು ಹೇಳಿ ,ಕೇಳಿ ಬರುವಂತಹುದಲ್ಲ. ಅದು ಹೃದಯದಿಂದ ಬರುವಂತಹುದು. ಅದೊಂದು ಸಿದ್ದಿ, ಅನುಭವವೆ' ಎಂದು ಹೇಳುವ ವ್ಯಾಸರು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಏಕಾಂತ ಬಯಸುತ್ತಾರೆ. ಯಾವೊಂದು ರಗಳೆಯೂ ಇಲ್ಲದೆ ತನ್ನಷ್ಟಕ್ಕೆ ಒಂಟಿಯಾಗಿ ವ್ಯಾಸರು ಕುಳಿತರೆ ಅಲ್ಲೊಂದು ಅದ್ಭುತ ಕಥೆ ರಚನೆಯಾಗುತ್ತದೆ.
`ಉಷಾ ಕಿರಣ' ಕನ್ನಡ ದೈನಿಕದಲ್ಲಿ ಅವರು ಬರೆದ `ಜನಪಥ' ಅಂಕಣ ಬರಹ ಜನಪ್ರಿಯತೆ ಪಡೆದಿತ್ತು. ಈ ಅಂಕಣ ಬರಹಗಳನ್ನು 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಿಸಿ ಬಿಡುಗಡೆಗೊಳಿಸಿದೆ.

Thursday, June 12, 2008




ಬೆಂಕಿ ಬಿದ್ದ ಮೇಲೆ ಬಾವಿತೋಡುವ ಕಾರ್ಯ ಮಾಡದಿರಿ...



ಮತ್ತೆ ಮಳೆಗಾಲ ಮುನ್ನುಡಿ ಬರೆದಿದೆ... ಮಳೆಯಾರಂಭದಲ್ಲೇ ಕಡಲ್ ಕೊರೆತದ ಭೀತಿ ಕಂಡೊದಗಿದೆ. ಇದು ಸಂಪ್ರದಾಯದಂತೆ!
ಮಳೆಗಾಲ ಬಂತೆಂದರೆ ಕರಾವಳಿಯಲ್ಲಿ ಕಡಲ್ ಕೊರೆತ ಮಾಮೂಲಿ. ಕಲಡ್ ಕೊರೆತ ಆದಾಕ್ಷಣ ಶಾಸಕ, ಸಚಿವರಾದಿಯಾಗಿ ಎಲ್ಲರೂ ಕಡಲಿನತ್ತ ಒಂದು ಪಯಣ, ತತರ್ು ಪರಿಹಾರ ಕಾರ್ಯಗಳ ಆರಂಭ. ಲೋಡ್ ಲೋಕ್ ಕಲ್ಲುಗಳನ್ನು ಕಡಲೊಡಲು ಸೇರಿಸುವ ವ್ಯರ್ಥ ಪ್ರಯತ್ನ. ಇದರೊಂದಿಗೆ ಲಕ್ಷಾಂತರ ರುಪಾಯಿ ಮಂಗಮಾಯ... ತುತರ್ು ಪರಿಹಾರ ನಿಧಿಯಿಂದ ಅದೊಂದಿಷ್ಟು ಮಂದಿಗೆ ಪರಿಹಾರ ವಿತರಣೆ. ಇದು ಜೂನ್ , ಜುಲೈ ತಿಂಗಳಲ್ಲಿ ವರ್ಷಂಪ್ರತಿ ಸಂಪ್ರದಾಯದಂತೆ ನಡೆದು ಬರುತ್ತಿದೆ ಕಳೆದ ಕೆಲವು ವರ್ಷಗಳಿಂದ. ಇದು ಈ ವರ್ಷವೂ ಮುಂದುವರಿದಿದೆ.
`ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ' ಎಂಬ ಗಾದೆಯಂತೆ... ಮಳೆಗಾಲ ಬರುವುದಕ್ಕೂ ಮುನ್ನ ಕಡಲ್ ಕೊರೆತದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ, ಮಳೆಗಾಲ ಆರಂಭಗೊಂಡು ಕಡಲ್ ಕೊರೆತ ಪ್ರಾರಂಭವಾಗುವಾಗ ಇದರತ್ತ ಎಚ್ಚೆತ್ತುಕೊಳ್ಳುತ್ತಾರೆ. ಇದು ಆರಂಭದಲ್ಲೇ ಆದರೆ ಅದೆಷ್ಟೋ ಹಣ ಉಳಿಯುವುದಿಲ್ಲವೇ. ಗೊತ್ತಿದ್ದು ಗೊತ್ತಿದ್ದೂ ಕಡಲ ಬಳಿಯಲ್ಲೇ ಮನೆ ನಿಮರ್ಿಸಿ ಪರಿಹಾರ ಹಣ ಪಡೆದುಕೊಳ್ಳುವ ಸಲುವಾಗಿಯೇ ತಮ್ಮ ಚಾಣಾಕ್ಷ ಬುದ್ದಿಯನ್ನು ತೋರಿಸುವ ಮಂದಿ ಅದೆಷ್ಟೋ. ಇದೆಲ್ಲಾ ಯಾಕೆ ಇನ್ನೂ ನಮ್ಮ ಜನಪ್ರತಿನಿಧಿಗಳಿಗೆ ಗೊತ್ತಾಗುತ್ತಿಲ್ಲ ಎಂಬುದು ವಿಚಿತ್ರವಾದರೂ ಸತ್ಯ ಸಂಗತಿ.
ಇದೀಗ ಹೊಸ ಸರಕಾರ ರಚನೆಯಾಗಿದೆ. ಜೊತೆಗೆ ಕಡಲ್ ಕೊರೆತವೂ ಪ್ರಾರಂಭಗೊಂಡಿದೆ. ಈ ಬಾರಿಯ ಮಳೆಗಾಲ ಮುಗಿದಾಕ್ಷಣ ಸರಕಾರ ಕಡಲ್ ಕೊರೆತಕ್ಕೊಳಗಾಗುವ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ವರ್ಷಂಪ್ರತಿ ಲಕ್ಷಾಂತರ ರುಪಾಯಿ ನೀರಿಗೆ ಸುರಿಯುವ ಬದಲಾಗಿ ಒಂದು ವ್ಯವಸ್ಥಿತವಾದ ಕಾಮಗಾರಿ ನಡೆಸಿದ್ದೇ ಆದಲ್ಲಿ ಒಂದಷ್ಟು ಹಣ ಬೊಕ್ಕಸದಲ್ಲಿ ಉಳಿಯಬಹುದು ಎಂಬ ಸಣ್ಣ ಚಿಂತನೆಯನ್ನು ಮಾಡಬೇಕಾಗಿದೆ.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಇದೀಗ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೂ ಮಳೆಗಾಲ ಬಿದ್ದಾಗ ಎಚ್ಚರವಾಗಿದೆ. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಮಗಾರಿ ಚುರುಕಾಗಲು ಪ್ರಾರಂಭಗೊಂಡಿದೆ. ಮಳೆಯ ಮಧ್ಯೆ ಕಾಮಗಾರಿ ನಡೆಸಿದರೆ ಅದೆಷ್ಟು ಪರಿಣಾಮಕಾರಿಯಾಗಿ ಆಗುವುದೆಂಬುದು ಆ ದೇವನೇ ಬಲ್ಲ. ಬೇಸಗೆಯಲ್ಲಿ ನಿದ್ದೆ ಮಾಡಿದಂತಿದ್ದ ಇವರಿಗೆಲ್ಲ ಮಳೆಗಾಲ ಆರಂಭಗೊಂಡು ಧಾರಾಕಾರ ಮಳೆ ಬೀಳುತ್ತಿರಬೇಕಾದರೆ ಇದೆಲ್ಲಾ ನೆನಪಾಗುವುದೇಕೆಂದು ಗೊತ್ತಾಗುತ್ತಿಲ್ಲ. ಪಯರ್ಾಯ ಮಾರ್ಗದ ವ್ಯವಸ್ಥೆ ಮಾಡಿದೆಯಾದರೂ ಟ್ರಾಫಿಕ್ ಜಾಮ್, ಹೊಂಡ ಗುಂಡಿಗಳಿಂದಾಗಿ ಸಂಚಾರವೇ ದುಸ್ತರವಾದಂತಾಗಿದೆ.
ಚತುಷ್ಪಥ ಕಾಮಗಾರಿಯಿಂದಾಗಿ ಹೆದ್ದಾರಿ ಸಂಚಾರ ಮಾತ್ರ `ನರಕಯಾತನೆ'. ಒಂದೆಡೆ ಮಳೆನೀರು ನಿಂತು ಎತ್ತರತಗ್ಗುಗಳು ಕಾಣುತ್ತಿಲ್ಲ. ಸಂಪೂರ್ಣ ಕೆಸರುಮಯ. ಅಂತೂ ಜೀವಭಯದಲ್ಲಿ ಹೆದ್ದಾರಿಯಲ್ಲಿ ಸಾಗುವಂತಾಗಿದೆ.
ಜಿಲ್ಲೆಯಾದ್ಯಂತ ಚಿಕೂನ್ ಗುನ್ಯಾ ರೋಗ ತೀವ್ರಗತಿಯಲ್ಲಿ ಹಬ್ಬಿದೆ. ಆರೋಗ್ಯ ಇಲಾಖೆಯ ಲೆಕ್ಕದಲ್ಲಿ ರೋಗ ಬಾಧೆಗೊಳಗಾದವರ ಸಂಖ್ಯೆ ಕಡಿಮೆಯೇ ಆದರೂ ವಾಸ್ತವವಾಗಿ ಈ ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯ ಪರಿಣಾಮಕಾರಿಯಾಗಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬುದಂತೂ ಸ್ಪಷ್ಟ. ಸ್ವಯಂ ಸೇವಾ ಸಂಸ್ಥೆಗಳು, ಖಾಸಗೀ ಆಸ್ಪತ್ರೆಗಳು, ಸೇವಾ ಸಂಸ್ಥೆಗಳು, ಧಾಮರ್ಿಕ ಸಂಸ್ಥೆಗಳು ಮುತುವಜರ್ಿ ವಹಿಸಿ ರೋಗ ನಿಯಂತ್ರಣ ಕಾರ್ಯದಲ್ಲಿ ಶ್ಲಾಘನೀಯ ಕಾರ್ಯ ಮಾಡಿದೆ.
ಸರಕಾರಿ ಆಸ್ಪತ್ರೆಗಳು ತಮ್ಮ ಲಂಚಾವತಾರದ ಚಾಳಿ ಬಿಟ್ಟು ರೋಗಿಗಳ ಸೇವೆಯಲ್ಲಿ ತೊಡಗಬೇಕಾಗಿದೆ. ಇಲ್ಲಿರುವ ವೈದ್ಯಾಧಿಕಾರಿಗಳು ತಮ್ಮ ಸೇವೆಯನ್ನು ನೀಡಬೇಕಾಗಿದೆ. ಆಸ್ಪತ್ರೆಗಳೇ ರೋಗ ಉತ್ಪತ್ತಿ ತಾಣಗಳಾಗದೆ ಆಸ್ಪತ್ರೆಗಳು ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನಪ್ರತಿನಿಧಿಗಳು ಸಕರ್ಾರಿ ಆಸ್ಪತ್ರೆಗಳ `ಆಪರೇಷನ್'ನತ್ತ ಗಮನ ಹರಿಸುವ ಅನಿವಾರ್ಯ ಸ್ಥಿತಿ ಜಿಲ್ಲೆಯಲ್ಲಿದೆ.
ಒಂದಿಷ್ಟು: ಹೊಸ ಸರಕಾರದ ಸಚಿವರ `ತೀರ್ಥ ಯಾತ್ರೆ' ಇದೀಗ ಆರಂಭವಾಗಿದೆ. ಎಲ್ಲಾ ಧಾಮರ್ಿಕ ಕ್ಷೇತ್ರಗಳ ದರ್ಶನ ಭಾಗ್ಯ ಪಡೆಯುವ ಸರದಿ ಈ ನೂತನ ಸಚಿವರದ್ದು. ಇದೀಗ ಜಿಲ್ಲೆಯ ಪ್ರಮುಖ ಕ್ಷೇತ್ರಗಳತ್ತ ಗೃಹಮಂತ್ರಿಗಳಾದಿಯಾಗಿ ಪ್ರಮುಖ ಸಚಿವರು ಆಗಮಿಸತೊಡಗಿದ್ದಾರೆ. ಚುನಾವಣೆಗೆ ಮುನ್ನ ಹೊತ್ತ ಹರಕೆಯ ತೀರಿಸುವತ್ತ ನಾಮುಂದು ತಾಮುಂದು ಎಂಬಂತೆ!




ಭಾರತ ಸರಕಾರದ ಸ್ವಾಯುತ್ತ ಸಂಸ್ಥೆಯಾದ ನೆಹರು ಯುವ ಕೇಂದ್ರ ಸಂಘಟನ್
ಗೋಹತಿ , ಅಸ್ಸಾಂ ಈಶಾನ್ಯ ರಾಜ್ಯಗಳ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಿದೆ.
ತಲಾ 20ಮಂದಿ ಮಣಿಪುರಿ ಯುವಕ ಯುವತಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮಂಗಳೂರಿನ ನೆಹರು ಯುವ
ಕೇಂದ್ರವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದಲ್ಲಿ ಸ್ಥಳೀಯ ಗ್ರಾ.ಪಂ ಮತ್ತು
ಚೈತನ್ಯ ಮಿತ್ರಮಂಡಳಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.


ವರ್ಷವೈಭವದಲ್ಲೊಂದು ಸಾಂಸ್ಕೃತಿಕ ವಿನಿಮಯ

ವರ್ಣ ವೈವಿಧ್ಯಗಳ ವಸ್ತ್ರವಿನ್ಯಾಸ... ಚಪ್ಪಾಳೆಯ ಲಯಬದ್ಧವಾದ ತಾಳದೊಂದಿಗೆ ಹಾಡು-ಕುಣಿತ... ಮದ್ದಳೆಯನ್ನೇ ಹೋಲುವ ಚರ್ಮವಾದ್ಯದೊಂದಿಗೆ ನೃತ್ಯ, ಕೈ-ಕೈ ಹಿಡಿದು ವಿಭಿನ್ನವಾದ ಕಲಾಪ್ರದರ್ಶನ, ರಾಸ್ ಲೀಲಾ ನೃತ್ಯವಂತೂ ಮನಮೋಹಕ. ಇದೆಲ್ಲಾ ನಮ್ಮ ರಾಜ್ಯದ ನೃತ್ಯಗಳೇ ಅಲ್ಲ... ಆದರೆ ಈ ಎಲ್ಲಾ ನೃತ್ಯಗಳ, ಕಲಾ ಪ್ರಕಾರಗಳ, ಸಾಂಪ್ರದಾಯಿಕ ಆಚರಣೆ, ಊಟ, ಉಪಚಾರ ಸಂಸ್ಕೃತಿಯ ಪರಿಚಯ ಪಡೆಯುವ ಭಾಗ್ಯವಂತೂ ಒಲಿದು ಬಂದಿದೆ...
ಹೌದು...ಮಣಿಪುರ ರಾಜ್ಯದ 6 ಜಿಲ್ಲೆಗಳ ನಲ್ವತ್ತು ಯುವಜನರ ತಂಡವೊಂದು ಹತ್ತು ದಿನಗಳ ಅಧ್ಯಯನ, ಅಂತರ್ ರಾಜ್ಯ ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕಾಗಿ ಇದೀಗ ಜಿಲ್ಲೆಗಾಗಮಿಸಿದೆ. ಅಷ್ಟೇ ಅಲ್ಲ ಇಲ್ಲಿನ ವಾಸ್ತವ್ಯ ವಿಶೇಷಗಳನ್ನೂ ಅವರು ಅನುಭವಿಸಲಿದ್ದಾರೆ. ಕರಾವಳಿಯ ಸಾಂಸ್ಕೃತಿಕ ವೈಭವ, ಆಹಾರ, ಜೀವನ ಶೈಲಿ, ಕಲೆ, ಯಾತ್ರಾ ಸ್ಥಳ ಹೀಗೆ ಹತ್ತು ಹಲವು ವಿಚಾರಗಳನ್ನು ತಮ್ಮ ಈ ಪ್ರವಾಸದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ವೀಕ್ಷಿಸಲಿದ್ದಾರೆ. ತನ್ಮೂಲಕ ತುಳುನಾಡಿನ ಆತಿಥ್ಯ ಸವಿಯುವ ಭಾಗ್ಯ ಅವರದ್ದಾಗಲಿದೆ.
ಈ ಯುವಜನರು ಕಾರ್ಕಳ ತಾಲೂಕಿನ ಕಲ್ಯಾದ ಆಯ್ದ 22ಮನೆಗಳಲ್ಲಿ ವಾಸ್ತವ್ಯ ಹೂಡಲಿದ್ದು ಮಣಿಪುರ ರಾಜ್ಯದ ಸಂಸ್ಕೃತಿ, ಆಚಾರ ವಿಚಾರ, ಪಾರಂಪರಿಕ ಗುಡ್ಡಗಾಡು ನೃತ್ಯಗಳ ಪರಿಚಯವನ್ನು ಮಾಡಿಕೊಡಲಿದ್ದಾರೆ.
ಯುವ ಜನರಲ್ಲಿ ರಾಷ್ಟ್ರೀಯ ಐಕ್ಯತೆ, ಒಗ್ಗಟ್ಟು, ಭಾತೃತ್ವದ ಮೌಲ್ಯಗಳ ಪರಿಚಯಾಗಬೇಕು, ದೇಶದ ಈಶಾನ್ಯ ಭಾಗದ ಹಾಗೂ ಇತರ ಭಾಗದ ಯುವ ಜನರಿಗೆ ಸಂಸ್ಕೃತಿ,ಭಾಷೆ, ಜೀವನ ಶೈಲಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸ್ಥಳಗಳ ಪರಿಚಯವಾಗಬೇಕು, ಎರಡೂ ರಾಜ್ಯಗಳ ಯುವ ಜನರಲ್ಲಿ ಮಿತೃತ್ವ ಬಾಂಧ್ಯವ್ಯಗಳನ್ನು ವೃದ್ಧಿಸುವುದೂ ಸೇರಿದಂತೆ ಈಶಾನ್ಯ ಭಾಗಗಳ ಜನರ ಬಗೆಗೆ ಈ ಭಾಗದ ಜನತೆಯಲ್ಲಿ ಕ್ರಿಯಾಶೀಲ ಆಸಕ್ತಿ ಮೂಡಿಸುವುದು ಮತ್ತು ಇತರ ಭಾಗಗಳ ಬಗೆಗೆ ಅರಿವು ಮೂಡಿಸುವುದು , ಜೀವನ ಶೈಲಿ ಪರಿಚಯಿಸುವುದು ಈ ಕಾರ್ಯಕ್ರಮ ಪ್ರಮುಖ ಉದ್ದೇಶವಾಗಿದೆ.
ಜೂ.9ರಂದು ಗೌಹಾಟಿಯಿಂದ ಈ ತಂಡ ಹೊರಟು ಬುಧವಾರ ಬೆಂಗಳೂರು ಪ್ರವೇಶಿಸಿದೆ. ಗುರುವಾರ ಮಂಗಳೂರು ಪುರಪ್ರವೇಶಗೈದಿದ್ದು, ಸಂಜೆ ಕಲ್ಯಾಕ್ಕೆ ಭೇಟಿ. 19ರ ತನಕ ಕಲ್ಯಾದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮಂಗಳೂರಿಗೆ ಹಿಂತಿರುಗಲಿದೆ. ಅದೇ ದಿನ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಪಯಣ. 20ರಂದು ರಾಜ್ಯಪಾಲರೊಂದಿಗೆ ಸಂವಾದ. ನಂತರ ಗೌಹಾಟಿಗೆ ಪಯಣ.

ಕರ್ನಾಟಕದ ಸಾಂಸ್ಕೃತಿಕ ವೈಭವ, ಇಲ್ಲಿನ ಕಲಾ ಶ್ರೀಮಂತಿಕೆಗಳನ್ನು ಅಭ್ಯಸಿಸಲು, ಇಲ್ಲಿನವರ ಪ್ರೀತಯ ಆತಿಥ್ಯವನ್ನು ಸ್ವೀಕರಿಸಲು ನಮಗೊಂದು ಸದಾವಕಾಶ ಇದೀಗ ಪ್ರಾಪ್ತವಾಗಿದೆ. ಇದೊಂದು ನಮ್ಮ ಸೌಭಾಗ್ಯವೆಂದೇ ನಾವು ತಿಳಿದುಕೊಂಡಿದ್ದೇವೆ. ತನ್ಮೂಲಕ ಎರಡೂ ರಾಜ್ಯಗಳ ಯುವ ಜನತೆಯಲ್ಲಿ ಮಿತೃತ್ವ ಭಾವನೆ ಮೂಡುವ ವಿಶ್ವಾಸ ನಮ್ಮದು -ಗುಣಚಂದ್ರ ಸಿಂಗ್, ತಂಡದ ನಾಯಕ.

Monday, May 26, 2008


ಮೋದಿ ಮೋಡಿಯಂತೂ ಆಯಿತು...ಆದರೆ...


ಬಿ.ಜೆ.ಪಿ ಜನತೆಯೆದುರು ಇರಿಸಿದ ಪ್ರಶ್ನೆಗಳಿಗೆ ಉತ್ತರ ದೊರಕುವುದೇ...


ಮೋದಿ ಮೋಡಿಯಂತೂ ಆಗಿದೆ. ಇನ್ನುಳಿದಿರುವುದು ಮಾದರಿ ರಾಜ್ಯದ ಕನಸು. ರಾಜ್ಯದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 110 ಸ್ಥಾನವನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಮ್ಮಿಶ್ರ ಸರಕಾರ ಪಥನಾನಂತರ ಬಿಜೆಪಿ `ಅನುಕಂಪದ' ಮಹಾಪೂರವನ್ನೇ ಪಡೆದಿತ್ತು. ಆದರೆ ಚುನಾವಣೆಗೆ ತುಸುಕಾಲ ತಗಲಿತಾದರೂ, ಈ ಬಾರಿ ಕಳೆದ ಚುನಾವಣೆಗಿಂತಲೂ ಬಿಜೆಪಿ ಅತ್ಯಧಿಕ ಸಂಖ್ಯೆಯ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತು. ಸಂಪೂರ್ಣ ಬಹುಮತ ಹೊಂದಿಲ್ಲವಾದರೂ ವಿಧಾನ ಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಆರಿಸಿ ಬಂದಿದೆ. ಜನಾದೇಶ ಬಿಜೆಪಿಯತ್ತ ವಾಲಿದೆ.
ಇದು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ಗೆ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.
ಚುನಾವಣಾ ಸಂದರ್ಭದಲ್ಲಿ ವಾಚಾಮಗೋಚರ ಮಾತಿನ ಛಾಟಿ ಯೇಟು ಬೀಸುತ್ತಿದ್ದ ಹಿರಿಯ ರಾಜಕೀಯ ಮುಖಂಡರು ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ತೆಪ್ಪಗೆ ಕೂತುಬಿಟ್ಟಿದ್ದಾರೆ...
ರಾಜ್ಯದ ಜನತೆಗೆ ಬದಲಾವಣೆ ಬೇಕಾಗಿತ್ತು. ಆ ಕಾರಣಕ್ಕಾಗಿಯೇ ಈ ಬಾರಿಯ ಚುನಾವಣಾ ಫಲಿತಾಂಶ ಬದಲಾಗಿದೆ. ಒಂದು ಹೊಸ ದಾಖಲೆಯನ್ನು ಸೃಷ್ಠಿಸಿದೆ.
ಚುನಾವಣೆ ಸನಿಹ ಬರುತ್ತಿದ್ದಂತೆಯೇ ಬಿಜೆಪಿ ವೈವಿಧ್ಯಪೂರ್ಣ ಜಾಹೀರಾತುಗಳ ಮೂಲಕ ಮತದಾರರಲ್ಲಿ ವಿನಂತಿಸಿದೆ. ರಾಜ್ಯದ ಬದಲಾವಣೆಗೆ ಬಿಜೆಪಿಯೊಂದೇ ಪರಿಹಾರ ಎಂದು ಹೇಳಿಕೊಂಡಿದೆ. ಅವುಗಳಲ್ಲಿ ಕೆಲವು ಹೀಗಿವೆ.
`ಅವರು ದ್ರೋಹ ಬಗೆದದ್ದು ಯಾರಿಗೆ, ಬಿಜೆಪಿಗೋ, ಕನರ್ಾಟಕದ ಜನತೆಗೋ... ಕಳೆದ ಚುನಾವಣೆಯಲ್ಲಿ ಜನಾದೇಶಕ್ಕೆ ದ್ರೋಹ ಬಗೆದರು; ಸಂಚು ನಡೆಸಿದರು, ಸೊತು ಸುಣ್ಣಾದ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರು. ಕನರ್ಾಟಕದ ಜನತೆಗೆ ಬಹಿರಂಗವಾಗಿ ಕೊಟ್ಟ ವಚನವನ್ನು ಎಗ್ಗಿಲ್ಲದೆ ಮುರಿದರು . ಅದಕ್ಕಾಗಿ ಬಿಜೆಪಿಗೆ ಪೂರ್ಣ ಬಹುಮತ ನೀಡಿ..'
`2ಗಂಟೆಯಲ್ಲಿ 6ಕಿ.ಮೀ... ಇದೂ ಒಂದು ಪ್ರಯಾಣವೇ... ಅಥವಾ ಬೆಂಗಳೂರಿನ ಜೀವನ ಟ್ರಾಫಿಕ್ ಜಾಮ್ ಎಂಬ ನರಕವಾಗಿದೆಯೇ... ಇದರ ಪರಿಹಾರಕ್ಕೆ ಬಿಜೆಪಿಯೇ ಪರಿಹಾರ...'
`ನಮ್ಮ ರೈತರಿಗೆ ಯೆಡಿಯೂರಪ್ಪ ಏಕೆ ಬೇಕು...? ಏಕೆಂದರೆ ಈ ಚುನಾವಣಾ ಹೋರಾಟ ನಡೀತಿರೋದು ಕಾಂಗ್ರೆಸ್ ಮತ್ತು ರೈತರ ನಡುವೆ. ಕಾಂಗ್ರೆಸ್ನ ಆಡಳಿತವಿರುವ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಕನರ್ಾಟಕದ ರೈತರಿಗೆ ಒಳ್ಳೆಯ ಬದುಕು ಬೇಕಿದೆ. ಅವರೆಲ್ಲರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ. ಇದಕ್ಕೆ ಬಿಜೆಪಿಯೇ ಪರಿಹಾರ, ಬಿಜೆಪಿನ್ನು ಪೂರ್ಣ ಬಹುಮತದಿಂದ ಗೆಲ್ಲಿಸಿ...'
`ಕಾಂಗ್ರೆಸಿನಿಂದ ಕನರ್ಾಟಕಕ್ಕೆ ದಕ್ಕಿದ್ದೇನು? ಬರೀ ಸಂಕಟ, ನೋವು... ನಾಡು, ನುಡಿ, ನೆಲ, ಜಲ ಎಲ್ಲಾ ವಿಷಯದಲ್ಲೂ ಕನರ್ಾಟಕಕ್ಕೆ ಅನ್ಯಾಯ, ಕೊನೆಗೂ ಕಾಲ ಕೂಡಿ ಬಂದಿದೆ. ಕಾಂಗ್ರೆಸ್ಸಿಗೆ ಪಾಠ ಕಲಿಸಬೇಕಾಗಿದೆ. ಇದಕ್ಕೆ ಬಿಜೆಪಿಯೇ ಪರಿಹಾರ'
`ನಿಮಗೊಂದು ಸೂರು ಬೇಕೇ? ಹಾಗಾದರೆ ಕಾಂಗ್ರೆಸನ್ನು ಮಾತ್ರ ಕೇಳಬೇಡಿ... ಕಾಂಗ್ರೆಸ್ ನಿಮ್ಮನ್ನು ಸತಾಯಿಸುವುದನ್ನು ಇನ್ನೆಷ್ಟು ಕಾಲ ಸಹಿಸುತ್ತೀರಿ.. ಬಿಜೆಪಿಗೆ ಬಹುಮತ ನೀಡಿ. ಬಿಜೆಪಿಯೇ ಪರಿಹಾರ'
ಇವುಗಳೆಲ್ಲವೂ ಅತ್ಯಂತ ಸುಂದರವಾಗಿದೆ. ಆದರೆ ರಾಜ್ಯದ ಚುಕ್ಕಾಣಿ ಹಿಡಿದ ನಂತರ ಇವುಗಳ ಅನುಷ್ಠಾನಕ್ಕೆ ಬಿ.ಜೆ.ಪಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ವಚನ ಉಳಿಸಿ, ನುಡಿದಂತೆ ನಡೆಯಬೇಕಾಗಿದೆ. ಹೀಗೆ ಮಾಡಿದ್ದೇ ಆದಲ್ಲಿ ಜನಾದೇಶಕ್ಕೆ ಒಂದು ಮಹತ್ವ ಬಂದಂತಾಗುತ್ತದೆ. ಮೋದಿಯ ಮಾತು ನಿಜವಾದಂತಾಗುತ್ತದೆ. ಕನರ್ಾಟಕವೂ ಗುಜರಾತ್ನಂತೆ ಅಭಿವೃದ್ಧಿ ಕಾಣಲು ಸಾಧ್ಯವಿದೆ.